ಜ್ಞಾಪಕ ಚಿತ್ರಪಟ

0
51

ಸಣ್ಣಗಡಿಯಾರದ ಬಳಿ ಸುಮ್ಮನೇ ನಿಂತವರು. ಇಸವಿ: ಗೊತ್ತಿಲ್ಲ.

ಬಹಳ ವರ್ಷಗಳ ಹಿಂದೆ ಮೈಸೂರು ಸಣ್ಣ ಗಡಿಯಾರದ ಬಳಿ ಸುಮ್ಮನೆ ನಡೆದು ಹೋಗುತ್ತಿದ್ದವರು ಅಜ್ಞಾತ ಫೋಟೋಗ್ರಾಫರನೊಬ್ಬನ ಮಸೂರಗಳಿಗೆ ಸಿಲುಕಿ ಅಲ್ಲೇ ಶಾಶ್ವತರಾಗಿ ಉಳಿದು ಕೊಂಡಿರುವುದು ಹೀಗೆ. ಇವರು ಯಾರು? ಯಾವೂರಿನ ಯಾವ ಕೇರಿಯವರು? ಎಲ್ಲಿಂದ ಬಂದವರು ಎಲ್ಲಿಗೆ ಹೊರಟಿದ್ದರು ಎಂಬ ಯಾವ ಮಾಹಿತಿಯೂ ಇಲ್ಲ. ಯಾವ ಇತಿಹಾಸ ಪುಸ್ತಕವೂ,ಯಾವ ಕವಿತೆಗಳ ಸಾಲೂ ಇವರ ಕುರಿತು ಉಲ್ಲೇಖಿಸಿರುವುದಿಲ್ಲ. ಆದರೂ ಅವರು ಈ ಅಪರೂಪದ ಫೋಟೋದಲ್ಲಿ ಇನ್ನೂ ಹಾಗೆಯೇ ನಿಂತುಕೊಂಡಿದ್ದಾರೆ.

(ಫೋಟೋಕೃಪೆ ; ಮೈಸೂರಿನ ರಾಂಸನ್ಸ್ ಕಲಾ ಪ್ರತಿಷ್ಟಾನ)